• 08251 231197
  • vptputtur@yahoo.co.in

ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರಾರಂಭೋತ್ಸವ

ಆಡಳಿತ ಮಂಡಳಿ, ಶಿಕ್ಷಕ ವರ್ಗ, ಪೋಷಕರು ಹಾಗೂ ವಿದ್ಯಾರ್ಥಿಗಳು ವಿದ್ಯಾ ಸಂಸ್ಥೆಯ 4 ಸ್ಥಂಭಗಳಿದ್ದಂತೆ -ಪ್ರೊ. ವಿ.ಜಿ.ಭಟ್

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನ ಪ್ರಥಮ ವರ್ಷದ ತರಗತಿಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಗಣಪತಿ ಹೋಮ ಹಾಗೂ ಸರಸ್ವತಿ ಆರಾಧನ ಕಾರ್ಯಕ್ರಮದೊಂದಿಗೆ ಜುಲೈ 11 ರಂದು ನಡೆಸಲಾಯಿತು, ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕೇಶವಸಂಕಲ್ಪ ಸಭಾ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಭಾರತಮಾತೆಗೆ ಪುಷ್ಪಾರ್ಚನೆ ಗೈದು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ವಿವೇಕಾನಂದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ವಿಷ್ಣು ಗಣಪತಿ ಭಟ್ ಇವರು ಮಾತನಾಡುತ್ತಾ, ಆಡಳಿತ ಮಂಡಳಿ, ಶಿಕ್ಷಕ ವರ್ಗ, ಪೋಷಕರು ಹಾಗೂ ವಿದ್ಯಾರ್ಥಿಗಳು ವಿದ್ಯಾ ಸಂಸ್ಥೆಯ ೪ ಸ್ಥಂಭಗಳಿದ್ದಂತೆ. ಇವುಗಳಲ್ಲಿ ಯಾವುದಾದರೂ ಒಂದರಲ್ಲಿ ವ್ಯತ್ಯಾಸ ಕಂಡುಬಂದರೂ ವಿದ್ಯಾಸಂಸ್ಥೆಗೆ ತೊಂದರೆಯಾಗುತ್ತದೆ. ಮೊಬೈಲನ್ನು ಕೇವಲ ಮನೋರಂಜನೆಯ ಸಾಧನೆಯಾಗಿ ಉಪಯೋಗಿಸದೆ ಧನಾತ್ಮಕವಾಗಿ ತಮ್ಮ ಕಲಿಕೆಯ ವಿಷಯಗಳಿಗೆ ಸಂಬಂದಿಸಿದ ವಿಚಾರಗಳನ್ನು ತಿಳಿದುಕೊಳ್ಳಲು ಬಳಸುತ್ತಾ ಹೊಸ ಆವಿಷ್ಕಾರಗಳನ್ನು ಮಾಡುವಲ್ಲಿ ಇವರ ಉಪಯೋಗವನ್ನು ಮಾಡಿಕೊಳ್ಳಿ ಎಂದರು.

ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿ ಮಣಿಲ ಇವರು ವಿದ್ಯಾಸಂಸ್ಥೆಯ ನಿಯಮಗಳನ್ನು ಪಾಲಿಸಿ, ಉತ್ತಮ ನೈಪುಣ್ಯ ಕಲಿಕೆಯಿಂದ ಸಮಾಜಕ್ಕೆ ಯೋಗ್ಯ ನಾಗರಿಕರಾಗಿ ರೂಪುಗೊಳ್ಳಿ ಎಂದು ಹಿತವಚನ ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ ಇವರು ವಿವೇಕಾನಂದರ ಜೀವನ ಚರಿತ್ರೆಯನ್ನು ವಿವರಿಸುತ್ತಾ ಬುದ್ಧಿಯ ಜೊತೆಗೆ ಮನಸ್ಸನ್ನು ವಿದ್ಯಾರ್ಥಿಗಳು ಕೊಟ್ಟಲ್ಲಿ ಜೀವನದಲ್ಲಿ ಶ್ರೇಯಸ್ಸಾಗುವುದು ಎಂದರು.

ವಿವೇಕಾನಂದ ಪಾಲಿಟೆಕ್ನಿಕ್‌ನ ಪ್ರಾಂಶುಪಾಲರಾದ ಶ್ರೀ ಚಂದ್ರಕುಮಾರ್ ಪ್ರಾಸ್ತವಿಕವಾಗಿ ಮಾತನಾಡುತ್ತಾ ಅತಿಥಿಗಳನ್ನು ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ನರಸಿಂಹ ಪೈ, ಉಷಾ ಭಟ್ ಮುಳಿಯ, ಈಶ್ವರಚಂದ್ರ, ರವಿ ಮುಂಗ್ಲಿಮನೆ, ಸನತ್ ಕುಮಾರ್ ರೈ ಉಪಸ್ಥಿತರಿದ್ದರು. ಕಾಲೇಜಿನ ಇಲೆಕ್ಟ್ರಾನಿಕ್ಸ್ ವಿಭಾಗದ ಹಿರಿಯ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿ ಯಸ್ ಪ್ರಾರ್ಥನೆಯನ್ನು ನಡೆಸಿಕೊಟ್ಟರ. ವಿದ್ಯಾರ್ಥಿ ಕ್ಷೇಮಾಪನಾಧಿಕಾರಿ ಶ್ರೀಮತಿ ಪುಷ್ಪಾ ಬಿ ಯನ್ ವಂದಿಸಿದರು. ಇಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕರಾದ ಶ್ರೀಮತಿ ಉಷಾಕಿರಣ ಹಾಗೂ ಶ್ರೀ ಗುರುಪ್ರಸನ್ನ ಕಾರ್ಯಕ್ರಮ ನಿರ್ವಹಿಸಿದರು.

Highslide for Wordpress Plugin