• 08251 231197
  • vptputtur@yahoo.co.in

ಉದ್ಯೋಗ ನೈಪುಣ್ಯ ತರಬೇತಿ

ಇಡ್ಕಿದು ಸೇವಾ ಸಹಕಾರಿ ಸಂಘ ನಿ. ಅಮೃತ ಸಿಂಚನ ರೈತ ಸೇವಾ ಒಕ್ಕೂಟ, ಇಡ್ಕಿದು, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಇದರ ಸಹಯೋಗದಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರವು ತಾರೀಕು 26-5-2022 ರಿಂದ 31-5-2022 ರ ವರೆಗೆ ಆರು ದಿನಗಳ ಕಾಲ ನಡೆಯಿತು. ಕಾರ್‍ಯಕ್ರಮದ ಉದ್ಘಾಟಣೆಯನ್ನು ಎಸ್.ಆರ್ ರಂಗಮೂರ್ತಿ, ಮಾಜಿ ಸದಸ್ಯರು ಕರ್ನಾಟಕ ಲೋಕ ಸೇವಾ ಆಯೋಗ ಬೆಂಗಳೂರು ಇವರು ನಡೆಸಿಕೊಟ್ಟರು. ಈ ಕಾರ್‍ಯಕ್ರಮದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ಸಂಚಾಲಕರಾದ ಮಹಾದೇವ ಶಾಸ್ತ್ರಿ ಮಣಿಲ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಈ ಶಿಬಿರದಲ್ಲಿ ಸಿಸಿಟಿವಿ ಹಾಗೂ ಮೊಬೈಲ್ ಫೋನ್ ದುರಸ್ಥಿ, ಕೃಷಿ ಯಂತ್ರೋಪಕರಣಗಳ ಬಳಕೆ ಹಾಗೂ ದುರಸ್ಥಿ, ಪುಡ್ ಟೆಕ್ನಾಲಜಿ, ಫ್ಯಾಷನ್ ಡಿಸೈನ್, ಮಧು ಮಾಹಿತಿ ಮತ್ತು ವಿದ್ಯುತ್ ಉಪಕರಣಗಳ ದುರಸ್ಥಿ ಎಂಬ ಆರು ವಿಷಯಗಳಲ್ಲಿ 126 ಶಿಬಿರಾರ್ಥಿಗಳಿಗೆ ತರಬೇತಿ ನೀಡಲಾಯಿತು.

ಉದ್ಯೋಗ ನೈಪುಣ್ಯ ತರಬೇತಿ ಶಿಬಿರದ ಸಮರೋಪ ಸಮಾರಂಭ ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕರ್ನಾಟಕ ಸರಕಾರದ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರ ಉಪಸ್ಥಿತಿಯಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ಪಾಲಿಟೆಕ್ನಿಕ್‌ನ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ ವಹಿಸಿದ್ದರು. ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಹಾಗೂ ತಮ್ಮ ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಪ್ರಾಂಶುಪಾಲರಾದ ಶ್ರೀ ಗೋಪಿನಾಥ ಶೆಟ್ಟಿಯವರನ್ನು ಇಡ್ಕಿದು ಸೇವಾ ಸಹಕಾರಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.

Highslide for Wordpress Plugin