ವಿವೇಕಾನಂದ ಪಾಲಿಟೆಕ್ನಿಕ್ನಲ್ಲಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಪುತ್ತೂರು ತಾಲೂಕು ಘಟಕದ ವತಿಯಿಂದ ಮತ್ತು ವಾರಣಾಸಿ ಡೆವಲಪ್ಮೆಂಟ್ ಎಂಡ್ ರಿಸರ್ಚ್ ಪೌಂಡೇಶನ್ ಸಹಯೋಗದಲ್ಲಿ ವಿಶ್ವ ರೆಡ್ಕ್ರಾಸ್ ದಿನದ ಪ್ರಯುಕ್ತ ಯುವ ರೆಡ್ಕ್ರಾಸ್ ಸದಸ್ಯರಿಗೆ ಒಂದು ದಿನದ ಮಾಹಿತಿ ಮತ್ತು ತರಬೇತಿ ಕಾರ್ಯಗಾರ ವಿವೇಕಾನಂದ ಪಾಲಿಟೆಕ್ನಿಕ್ನಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟಕರಾದ ಶ್ರೀ ಗಿರೀಶ್ ನಂದನ್ ಸಹಾಯಕ ಕಮಿಷನರ್ ಪುತ್ತೂರು, ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ, ರೆಡ್ಕ್ರಾಸ್ ಸಂಸ್ಥೆ ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾಲೇಜಿನಲ್ಲಿ ಕಲಿಯುವ ವಿಷಯಗಳಿಗಿಂತ ಇಂತಹ ಮಾಹಿತಿ ಕಾರ್ಯಾಗಾರದಲ್ಲಿ ಕಲಿಯುವ ವಿಷಯಗಳು ತುಂಬಾ ಮುಖ್ಯ. ಜೀವ ರಕ್ಷಣಾ ತರಬೇತಿಗಳನ್ನು ಪಡೆದುಕೊಳ್ಳುವುದು ಅತೀ ಮುಖ್ಯ. ಸುರಕ್ಷತಾ ಕಾನೂನು ಪಾಲನೆ ಮಾಡಿ ನಮ್ಮ ಜೀವವನ್ನು ರಕ್ಷಿಸಿಕೊಳ್ಳುವುದರ ಮೂಲಕ ಇತರರ ಜೀವವನ್ನು ರಕ್ಷಿಸಲು ಸಹಾಯ ಮಾಡಬೇಕು. ಅಂತಹ ತರಬೇತಿಯನ್ನು ಪಡೆದು ಅದನ್ನು ಜೀವನದಲ್ಲಿ ಆಳವಡಿಸಿಕೊಳ್ಳಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ಪಾಲಿಟೆಕ್ನಿಕ್ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡುತ್ತಾ, ಯಾವುದೇ ಸಂಘಟನೆಯ ಗುರಿ ಅಥವಾ ಸಿದ್ಧಾಂತ ಎಲ್ಲರಿಗೂ ಒಪ್ಪಿಗೆಯಾದರೆ ಅಥವಾ ಆಕರ್ಷಣೆಯಾದರೆ ಅದು ನಿರಂತರವಾಗಿ ಧೀರ್ಘಾಕಾಲಿಕವಾಗಿ ಉಳಿದುಕೊಳ್ಳುತ್ತದೆ. ರೆಡ್ಕ್ರಾಸ್ ಹಾಗೂ ರೋಟರಿ ಸಂಸ್ಥೆ ಇಂತಹ ಎರಡು ಸಂಸ್ಥೆಗಳು. ನೈಸರ್ಗಿಕ ವಿಕೋಪ ಅಥವಾ ತುರ್ತು ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡುವುದಕ್ಕಾಗಿ ಆರಂಭಗೊಂಡ ಈ ಸಂಸ್ಥೆ ಶಾಶ್ವತವಾಗಿ ನಡೆಯುತ್ತಾ ಇದೆ. ಸಮಾಜಕ್ಕೆ ಪ್ರವೇಶ ಮಾಡುವ ಹಂತದಲ್ಲಿ ವಿದ್ಯಾರ್ಥಿಗಳು ಒಂದು ಹವ್ಯಾಸವಾಗಿ ಇಂತಹ ಉತ್ತಮ ಸಂಘಟನೆಗಳ ಜೊತೆ ಗುರುತಿಸಿ ಕೊಂಡಾಗ ಸಮಾಜಕ್ಕೂ ನಿಮಗೂ ಒಳ್ಳೆಯದಾಗುತ್ತದೆ. ನಿಮ್ಮ ಹೆಸರು ಊರಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಎಂದರು.
ವಿವೇಕಾನಂದ ಪಾಲಿಟೆಕ್ನಿಕ್ನ ಪ್ರಾಚಾರ್ಯರಾದ ಗೋಪಿನಾಥ ಶೆಟ್ಟಿ ಇವರು ತಮ್ಮ ಪ್ರ್ರಾಸ್ತಾವಿಕ ಭಾಷಣದಲ್ಲಿ ರೆಡ್ಕ್ರಾಸ್ ಸಂಸ್ಥೆ ಹುಟ್ಟಿ ಬೆಳೆದು ಬಂದ ರೀತಿ ಹಾಗೂ ಅದು ಸಮಾಜದಲ್ಲಿ ಮಾಡುವ ಉತ್ತಮ ಕಾರ್ಯಗಳನ್ನು ಶಿಬಿರಾರ್ಥಿಗಳಿಗೆ ಮನದಟ್ಟು ಮಾಡಿ ಅಥಿತಿಗಳನ್ನು ಸ್ವಾಗತಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿ ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ರೆಡ್ಕ್ರಾಸ್ ಕೋಶಾಧಿಕಾರಿ ಅಬ್ದುಲ್ ರೆಹಮಾನ್ ಯುನಿಕ್, ನಿರ್ದೇಶಕರಾದ ನವೀನ್ ನಾಯ್ಕ್ ಮತ್ತು ಮಹಮ್ಮದ್ ರಫೀಕ್ ವಿವಿಧ ವಿದ್ಯಾ ಸಂಸ್ಥೆಯ ಉಪನ್ಯಾಸಕರು ಭಾಗವಹಿಸಿದ್ದರು. ವಿವೇಕಾನಂದ ಪಾಲಿಟೆಕ್ನಿಕ್ನ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದ ನಿರ್ವಹಣೆಯನ್ನು ರೆಡ್ಕ್ರಾಸ್ ಕಾರ್ಯಕ್ರಮ ಸಂಯೋಜನಾ ಉಪಸಮಿತಿಯ ಮುಖ್ಯಸ್ಥ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ನಡೆಸಿಕೊಟ್ಟರು. ಕಾರ್ಯಕ್ರಮದ ಯಶಸ್ಸಿಗೆ ವಿವೇಕಾನಂದ ಪಾಲಿಟೆಕ್ನಿಕ್ನ ಉಪನ್ಯಾಸಕರಾದ ಪ್ರಮೋದ್ ಯಂ.ಯಸ್., ಹಾಗೂ ಹೇಮಮಾಲಿನಿ, ಶಶಿಧರ್, ಸುಬ್ರಹ್ಮಣ್ಯ ಗೌಡ, ಸುಕೇಶ್ ರೈ ಮೊದಲಾದವರು ಸಹಕರಿಸಿದರು.
ಸಮಾರೋಪ
ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಉಪಸ್ಥಿತರಿದ್ದ ಪುತ್ತೂರು ನಗರಸಭಾ ಅಧ್ಯಕ್ಷರಾದ ಜೀವಂದರ್ ಜೈನ್ ಮಾತನಾಡಿ, ರೆಡ್ಕ್ರಾಸ್ ದಿನದ ಕಾರ್ಯಕ್ರವ ಸ್ಲಾಗನೀಯ. ಈ ತರಹದ ಕಾರ್ಯಕ್ರಮಗಳು ವಿದ್ಯಾರ್ಥಿ ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಪ್ರಥಮ ಚಿಕಿತ್ಸೆ ಮತ್ತು ಜೀವ ರಕ್ಷಣೆ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಜೊತೆಗೆ ತಿಳಿದಿರಬೇಕಾದ ವಿಚಾರ. ಈ ಕಾರ್ಯಕ್ರಮ ಇದಕ್ಕೆ ಪೂರಕವಾಗಿದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ವಿವೇಕಾನಂದ ಪಾಲಿಟೆಕ್ನಿಕ್ನ ಆಡಳಿತ ಮಂಡಳಿಯ ಸಂಚಾಲಕರಾದ ಮಹಾದೇವ ಶಾಸ್ತ್ರಿ ಮಣಿಲ, ಯಾವುದೇ ಸಂದರ್ಭದಲ್ಲಿ ಸಮಾಜದಲ್ಲಿ ಆಗುವಂತಹ ವಿಪತ್ತುಗಳನ್ನು ಎದುರಿಸಲು ಇಂತಹ ಕಾರ್ಯಕ್ರಮ ಪೂರಕವಾಗಿದ್ದು ರೆಡ್ಕ್ರಾಸ್ ಸಂಸ್ಥೆ ನಡೆಸಿಕೊಂಡು ಬರುವ ಇಂತಹ ಕಾರ್ಯಕ್ರಮಕ್ಕೆ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಸದಾ ಪ್ರೋತ್ಸಾಹವನ್ನು ಕೊಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರೆಡ್ಕ್ರಾಸ್ ಸಂಸ್ಥೆ ಪುತ್ತೂರು ಘಟಕದ ಸಭಾಪತಿಗಳಾದ ಸಂತೋಷ್ ಶೆಟ್ಟಿ, ಪ್ರಥಮ ಚಿಕಿತ್ಸೆ ಮತ್ತು ಜೀವರಕ್ಷಣೆಯ ಬಗ್ಗೆ ಮಾಹಿತಿ ಕಾರ್ಯಗಾರ ನಡೆಸಿಕೊಟ್ಟ ರೋಹಿತ್ ಪಿ., ವಿವೇಕಾನಂದ ಪಾಲಿಟೆಕ್ನಿಕ್ನ ಪ್ರಾಚಾರ್ಯರಾದ ಗೋಪಿನಾಥ ಶೆಟ್ಟಿ ಉಪಸ್ಥಿತರಿದ್ದರು. ಇಡೀ ದಿನದ ಕಾರ್ಯಾಗಾರದ ಬಗೆಗಿನ ಅನಿಸಿಕೆಗಳನ್ನು ವಿದ್ಯಾರ್ಥಿಗಳು ಹಂಚಿಕೊಂಡರು. ರೆಡ್ಕ್ರಾಸ್ ಪುತ್ತೂರು ಘಟಕದ ಸಭಾಪತಿ ಸಂತೋಷ್ ಶಟ್ಟಿ ಕಾರ್ಯಕ್ರಮದ ಅಥಿತಿಗಳನ್ನು ಸ್ವಾಗತಿಸಿದರು. ವಿವೇಕಾನಂದ ಪಾಲಿಟೆಕ್ನಿಕ್ನ ರೆಡ್ಕ್ರಾಸ್ ಘಟಕದ ಸಂಯೋಜಕರಾದ ಗುರುಪ್ರಸನ್ನ ಜೆ.ಕೆ. ವಂದಿಸಿದರು.