• 08251 231197
  • vptputtur@yahoo.co.in

ಸದ್ವಿಚಾರಧಾರಾ ಸರಣಿಯ ಎರಡನೆ ಕಾರ್ಯಕ್ರಮ

ಕರ್ಮಣ್ಯೇವಾಧಿಕಾರದಸ್ಥೇ ಮಾಪಲೇಚು ಕದಾಚನಾ – ವಿದ್ಯೆಯನ್ನು ಪಡೆಯಲು ಚಿಂತನಾಶೀಲ ಮನಸ್ಸು ಹಾಗೂ ಸೇವಾ ಮನೋಭಾವ ಇರಬೇಕು. ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೇ ಶ್ರದ್ಧೆಯಿಂದ ಕೆಲಸ ಮಾಡಬೇಕು – ಸುಬ್ರಾಯ ನಂದೋಡಿ.

ಪುತ್ತೂರು: ರಾಷ್ಟ್ರೀಯತೆಯನ್ನು ಮೈಗೂಡಿಸಿ ಸ್ವಾವಲಂಬಿ ಹಾಗೂ ಸ್ವಾಭಿಮಾನಿ ವಿದ್ಯಾರ್ಥಿಗಳನ್ನು ರೂಪುಗೊಳಿಸುವ ಹೊಂಗನಸು ಹೊತ್ತು ವಿವೇಕಾನಂದ ಪಾಲಿಟೆಕ್ನಿಕ್ ಆಯೋಜಿಸಿದ ಆದ್ಯಾತ್ಮಿಕ ಉಪನ್ಯಾಸ ಮಾಲಿಕೆಯ ಸರಣಿ ಕಾರ್ಯಕ್ರಮದ ಎರಡನೇ ಕಾರ್ಯಕ್ರಮವನ್ನು ಶ್ರೀಯುತ ಸುಬ್ರಾಯ ನಂದೋಡಿಯವರು ನಡೆಸಿಕೊಟ್ಟರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ, ಸೇವಾ ಪ್ರಮುಖರಾದ ಶ್ರೀಯುತ ಸುಬ್ರಾಯ ನಂದೋಡಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಗವಾದ್ಗೀತೆಯನ್ನು ವಿಶ್ಲೇಷಣೆ ಮಾಡುತ್ತಾ ಅದರ ಸಾರಾಂಶವನ್ನು ವಿದ್ಯಾರ್ಥಿಗಳ ಬೌದ್ಧಿಕ ಮಟ್ಟಕ್ಕೆ ಇಳಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳ ವಿವೇಕ ವಿಕಾಸವಾಗಬೇಕಾದರೆ ಭಗವಾದ್ಗೀತೆಯ ಪಠಣಮಾಡಿ ಅದರ ಅರ್ಥವನ್ನು ತಿಳಿದು ನಿಜ ಜೀವನದಲ್ಲಿ ಆಳವಡಿಸಿಕೊಳ್ಳಬೇಕು. ಭಗವದ್ಗೀತೆಯನ್ನು ಅಧ್ಯಯನ ಮಾಡಿ ಅರ್ಥ ಮಾಡಿಕೊಂಡು ಜೀವನದಲ್ಲಿ ಆಳವಡಿಸಿಕೊಂಡಾಗ ನಮ್ಮ ಜೀವನ ಅರ್ಥಪೂರ್ಣವಾಗುತ್ತದೆ. ಯುದ್ಧ ಭೂಮಿಯಲ್ಲಿ ಅರ್ಜುನನು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಯುದ್ಧದಿಂದ ವಿಮುಖನಾದಾಗ ಯೋಧನಾದ ಅವನ ಕರ್ತವ್ಯಗಳನ್ನು ನೆನಪಿಸಿ ಮನದಟ್ಟುವಂತೆ ಮಾಡಿದ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಪ್ರತಿಯೊಬ್ಬರೂ ಅವರವರ ಕರ್ತವ್ಯಗಳನ್ನು ಶ್ರದ್ಧೆಯಿಂದ ಮಾಡಿದಾಗ ಆ ಕಾರ್ಯವು ಫಲಪ್ರದವಾಗುತ್ತದೆ.

ವಿದ್ಯಾರ್ಥಿಗಳು ಸರಿಯಾದ ಜ್ಞಾನವಿಲ್ಲದೆ ಯಾವುದೇ ಕೆಲಸವನ್ನು ಕೈಗೊಳ್ಳಬಾರದು. ಸ್ವಚ್ಛ ಹಾಗೂ ಶಾಂತ ಮನಸ್ಸಿನಿಂದ ಅಧ್ಯಯನ ಮಾಡಬೇಕು. ಯಾವುದೇ ಉದ್ವೇಗಗಳಿಗೆ ದ್ವೇಷಕ್ಕೆ ಬಲಿಯಾಗಬಾರುದು. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಮಾಡುವ ಕೆಲಸವನ್ನು ಶಿಸ್ತುಬದ್ಧವಾಗಿ ಸಂಪೂರ್ಣ ಶ್ರದ್ಧಾಭಕ್ತಿಯಿಂದ ಪೂರ್ಣಗೊಳಿಸಬೇಕು. ನಮ್ಮ ಪರಿಸರದಲ್ಲಿ ಋಣಾತ್ಮಕ ಚಿಂತನೆಗಳು ತುಂಬಿಕೊಳ್ಳುತ್ತಾ ಇರುವ ಈ ಸಂದರ್ಭಗಳಲ್ಲಿ ನಾವು ಉತ್ತಮ ಚಿಂತನೆಗಳಾದ ಪ್ರಾರ್ಥನೆ ಭಜನೆ ಯೋಗ ಇತ್ಯಾದಿ ಚಟುವಟಿಕೆಗಳಿಂದ ನಮ್ಮ ಮನಸ್ಸನ್ನು ಧನಾತ್ಮಕ ಚಿಂತನೆಗಳ ಕಡೆಗೆ ಸಾಗುವಂತೆ ಮಾಡಬೇಕಾಗಿದೆ. ನಮ್ಮ ಮನಸ್ಸನ್ನು ಬುದ್ಧಿಯ ಹಿಡಿತದಲ್ಲಿ ಇರಿಸಿಕೊಳ್ಳಬೇಕು. ಇಲ್ಲವಾದರೆ ವ್ಯಕ್ತಿತ್ವವೇ ನಾಶವಾಗುತ್ತದೆ. ನಾವು ಸೇವಿಸುವ ಆಹಾರ ನಮ್ಮ ಮನಸ್ಸು ಹಾಗೂ ಶರೀರಕ್ಕೆ ಸೂಕ್ತವಾಗಿ ಹೊಂದುವಂತಿರಬೇಕು. ತನ್ನ ಸೋಲಿಗೆ ತಾನೇ ಕಾರಣ ಎಂಬುದನ್ನು ತಿಳಿದು ಬೇರೆಯವರನ್ನು ದೂಷಿಸಬಾರದು.

ನಮ್ಮ ಜೀವನದ ಆದರ್ಶ ವ್ಯಕ್ತಿಗಳು ಉತ್ತಮ ಸ್ವಭಾವ ಹಾಗೂ ಒಳ್ಳೆಯ ಚಿಂತನೆಗಳನ್ನು ಹೊಂದಿದವರಾಗಿರಬೇಕು. ನಮ್ಮ ಮನಸ್ಸು ಗಟ್ಟಿಯಾಗಿರಬೇಕು. ದುರ್ಬಲ ಹಾಗೂ ಕಲ್ಮಶ ಮನಸ್ಸಿನಿಂದ ಮಾಡಿದ ಕೆಲಸದಿಂದ ಏನನ್ನೂ ಸಾಧಿಸಲಾಗದು. ಅಹಂಕಾರಕ್ಕೆ ಆಸ್ಪದ ಕೊಡಬಾರದು. ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ಮಹಾದೇವಾ ಶಾಸ್ತ್ರಿ ಮಣಿಲ ಇವರು ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ, ಸದಸ್ಯರಾದ ಈಶ್ವರಚಂದ್ರ ಡಿ.ಎನ್., ರವಿ ಮುಂಗ್ಲಿಮನೆ, ಸನತ್ ಕುಮಾರ್ ರೈ, ಪ್ರಾಚಾರ್ಯರಾದ ಗೋಪಿನಾಥ ಶೆಟ್ಟಿ ಯಂ, ಪ್ರಥಮ ವರ್ಷದ ಎಲ್ಲಾ ತರಗತಿಗಳ ವಿದ್ಯಾರ್ಥಿಗಳು ಉಪನ್ಯಾಸಕರು ಉಪಸ್ಥಿತರಿದ್ದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ರವಿರಾಮ ಸಿದ್ದಮೂಲೆ ಕಾರ್ಯಕ್ರಮ ನಿರ್ವಹಿಸಿದರು. ಎಲೆಕ್ಟ್ರಾನಿಕ್ ವಿಭಾಗದ ಮುಖ್ಯಸ್ಥರಾದ ಮುರಳೀಧರ ಯಸ್ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಚಂದ್ರಕುಮಾರ್ ವಂದಿಸಿದರು.

Highslide for Wordpress Plugin