ಶಿಕ್ಷಕನಿಗೆ ಸಂವೇದನೆಗಳು ಬಹಳ ಮುಖ್ಯ – ಶ್ರೀ ಕೊಂಕೋಡಿ ಕೃಷ್ಣ ಭಟ್
ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರಿಗೆ ಒಂದು ದಿನದ ಪುನಶ್ಚೇತನಾ ಶಿಬಿರವನ್ನು ಆಡಳಿತ ಮಂಡಳಿ ವತಿಯಿಂದ ಆಯೋಜಿಸಲಾಗಿತ್ತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಕೆ.ಎಂ. ಕೃಷ್ಣ ಭಟ್ ಕೊಂಕೋಡಿಯವರು ಪುನಶ್ಚೇತನಾ ಶಿಬಿರದ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತಾ, ಒಬ್ಬ ಶಿಕ್ಷಕ, ತನ್ನ ವೃತ್ತಿ ಹಾಗೂ ವಿದ್ಯಾರ್ಥಿಗಳನ್ನು ಪ್ರೀತಿಸಿದಾಗ ಆ ಸಂಸ್ಥೆಯು ಪ್ರಬಲವಾಗಿ ಬೆಳೆಯುತ್ತದೆ ಎಂದರು. ಒಬ್ಬ ಉತ್ತಮ ಶಿಕ್ಷಕರ ಕಾರ್‍ಯ, ವಿದ್ಯಾರ್ಥಿಗಳೊಡನೆ ಅವರ ನಡವಳಿಕೆ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಶಿಕ್ಷಕರ ಜವಾಬ್ದಾರಿ ಹಾಗೂ ಸಕ್ರಿಯ ಭಾಗವಹಿಸುವಿಕೆ ಬಗ್ಗೆ ಕಿವಿಮಾತು ಹೇಳಿದರು.
ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್, ಬಂಗಾರಡ್ಕ ಇವರು ಕಾಲೇಜಿನ ಉನ್ನತಿಗಾಗಿ ಹೊಸ ಯೋಜನೆಗಳ ಕುರಿತು ಚರ್ಚಿಸಿದರು. ಸಂಚಾಲಕರಾದ ಶ್ರೀ ಸಿ. ಮಹಾದೇವ ಶಾಸ್ತ್ರಿ ಮಣಿಲ ಇವರು ಸಿಬ್ಬಂದಿಗಳನ್ನುದ್ದೇಶಿಸಿ ಮಾತನಾಡಿದರು. ಸದಸ್ಯರುಗಳಾದ ಶ್ರೀ ರವಿ ಮುಂಗ್ಳಿಮನೆ, ಶ್ರೀ ನರಸಿಂಹ ಪೈ, ಶ್ರೀಮತಿ ಉಷಾ ಭಟ್ ಮುಳಿಯ, ಶ್ರೀಮತಿ ಜಯಂತಿ ನಾಯಕ್, ಶ್ರೀ. ಸನತ್ ಕುಮಾರ್ ರೈ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನ ಗ್ರಂಥಾಲಯಕ್ಕೆ ಭಾರತೀಯ ರೈಲ್ವೆಯ ದಕ್ಷಿಣ ಕೇಂದ್ರೀಯ ವಿಭಾಗದ ನಿವೃತ್ತ ಅಭಿಯಂತರರಾದ ಶ್ರೀ ಚಂದ್ರಶೇಖರ್ ಭಟ್‌ರವರು ಸಿವಿಲ್ ವಿಭಾಗಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳನ್ನು ಗ್ರಂಥಾಲಯಕ್ಕೆ ದೇಣಿಗೆಯಾಗಿ ನೀಡಿದರು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎಂ. ಗೋಪಿನಾಥ ಶೆಟ್ಟಿ ನಡೆಸಿಕೊಟ್ಟರು.