• 08251 231197
  • vptputtur@yahoo.co.in

ಸ್ವದೇಶೀ ಸಂಭ್ರಮ

ಗಾಯತ್ರಿ ಕ್ರೆಡಿಟ್ ಕೋಪರೇಟಿವ್ ಸೊಸೈಟಿ ಮತ್ತು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು, ಪುತ್ತೂರು, ಇವರ ಸಹಯೋಗದೊಂದಿಗೆ ಅ.30 ರಿಂದ ನ.1 ರವರೆಗೆ ಪುತ್ತೂರು ಮಹಾಲಿಂಗೇಶ್ವರ ಸಭಾಭವನ, ನಟರಾಜ ವೇದಿಕೆಯಲ್ಲಿ ಸ್ವದೇಶೀ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

ಅ. 30 ರಂದು ಸನ್ಮಾನ್ಯ ಶಾಸಕರಾದ ಶ್ರೀ. ಸಂಜೀವ ಮಠಂದೂರು ಇವರು ಉದ್ಘಾಟಿಸಿದ ಈ ಮೇಳದಲ್ಲಿ, ಸ್ವದೇಶೀ ಕರಕುಶಲ ವಸ್ತುಗಳು, ತಿನಿಸುಗಳು ಹಾಗೂ ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಜನರನ್ನು ಆಕರ್ಷಿಸಿದವು.

ಶ್ರೀ. ಜಗದೀಶ್. ಕೆ., ಕ್ಷೇತ್ರೀಯ ಸಂಘಟಕರು, ಸ್ವದೇಶೀ ಜಾಗರಣ ಮಂಚ್, ಅವರಿಂದ “ಉದ್ಯೋಗವನ್ನು ಸೃಷ್ಟಿಸುವ ಮಾರ್ಗಗಳು”ಎಂಬ ವಿಷಯದಲ್ಲಿ ಉಪನ್ಯಾಸ; ವಿವೇಕಾನಂದ ಕಾಲೇಜಿನ ಲಲಿತ ಕಲಾ ಸಂಘದವರಿಂದ ಭಜನೆ, ಭಕ್ತಿ ಗೀತೆ, ದೇಶಭಕ್ತಿ ಗೀತೆಗಳ ವೈವಿಧ್ಯ; ವೈದೇಹಿ ವೈಷ್ಣವಿ ಮಹಿಳಾ ಭಜನಾ ತಂಡದವರಿಂದ ಭಜನೆ; ಶ್ರೀ. ಆದರ್ಶ ಗೋಖಲೆ ಹಾಗೂ ಸನಾತನ ನಾಟ್ಯಾಲಯ, ಮಂಗಳೂರು ತಂಡದವರಿಂದ ನುಡಿ-ನಾದ-ನಾಟ್ಯಾಂಮೃತ; ಮತ್ತು “ನರಕಾಸುರ ಮೋಕ್ಷ”ಯಕ್ಷಗಾನ ಬಯಲಾಟ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ಆಯೋಜನೆಗೊಂಡಿತ್ತು.

ನ.1 ರಂದು ಮಾನನೀಯ ಡಾ| ಪ್ರಭಾಕರ್. ಭಟ್., ಕಲ್ಲಡ್ಕ ಇವರಿಂದ “ಗಾಯತ್ರಿ ಸ್ವದೇಶಿ ಮಳಿಗೆ”ಯ ಲೋಕಾರ್ಪಣೆಯೊಂದಿಗೆ 3 ದಿನದ ಕಾರ್ಯಕ್ರಮ ಸಮಾರೋಪಗೊಂಡಿತು.

Highslide for Wordpress Plugin