ಪುತ್ತೂರು ತಾಲೂಕಿನ ಜನೌಷಧ ಕೇಂದ್ರಗಳ ಸ್ಥಾಪನೆಗೆ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದ “ವಿವೇಕಾನಂದ ಪಾಲಿಟೆಕ್ನಿಕ್, ಪುತ್ತೂರು” ಭಾರತೀಯ ಜನೌಷಧ ಪ್ರಬುದ್ಧ ಪ್ರಶಸ್ತಿಗೆ ಭಾಜನವಾಯಿತು. BPPI ಯೊಂದಿಗೆ 10 ಜನೌಷಧ ಕೇಂದ್ರಗಳ ಸ್ಥಾಪನೆಗೆ ಒಡಂಬಡಿಕೆಯನ್ನು ಮಾಡಿಕೊಂಡು 20 ಜನೌಷಧ ಕೇಂದ್ರಗಳನ್ನು ಸಂಪೂರ್ಣ ಸಹಕಾರದೊಂದಿಗೆ ತೆರೆಯಲಾಯಿತು. ಇಡೀ ಭಾರತದಲ್ಲಿ ಜನೌಷಧ ಕೇಂದ್ರಗಳ ಸ್ಥಾಪನೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಏಕೈಕ ಖಾಸಗಿ ವಿದ್ಯಾಸಂಸ್ಥೆಯಾಗಿ ಗುರುತಿಸಿಕೊಂಡಿತು. ಆರ್ಹವಾಗಿ ಭಾರತೀಯ ಜನೌಷಧ ಪ್ರಬುದ್ಧ ಪ್ರಶಸ್ತಿಯನ್ನು ಇಂದು ಕೇಂದ್ರ ಸರ್ಕಾರದ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನಗಳ ರಾಜ್ಯ ಸಚಿವ ಶ್ರೀಭಗವಂತ ಖೂಬ ಇವರಿಂದ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಗೋಪಿನಾಥ ಶೆಟ್ಟಿ ಯಂ ಹಾಗೂ ಸಂಚಾಲಕ ಶ್ರೀ ಮಹಾದೇವ ಶಾಸ್ತ್ರಿಯವರು ಸ್ವೀಕರಿಸಿದರು.