• 08251 231197
  • vptputtur@yahoo.co.in

ಪೂಲ್ ಕ್ಯಾಂಪಸ್ ನೇಮಕಾತಿ

ಪುತ್ತೂರು: ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಶಾಖೆಯನ್ನು ಹೊಂದಿರುವ ಭಾರತದ ಪ್ರತಿಷ್ಠಿತ ಟ್ರಾಕ್ಟರ್ ತಯಾರಿಕಾ ಸಂಸ್ಥೆಯಾದ ‘TAFE – Tractor Division’ ವತಿಯಿಂದ ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಪೂಲ್ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆ ನಡೆಸಲಾಯಿತು. ಇದರಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಹಾಗೂ ಸುತ್ತಮುತ್ತಲಿನ ಪಾಲಿಟೆಕ್ನಿಕ್‌ಗಳಾದ ಕೆ.ವಿ.ಜಿ. ಪಾಲಿಟೆಕ್ನಿಕ್ ಸುಳ್ಯ, ಸರಕಾರಿ ಪಾಲಿಟೆಕ್ನಿಕ್ ಬಂಟ್ವಾಳ, ಪ್ರಸನ್ನ ಪಾಲಿಟೆಕ್ನಿಕ್ ಬೆಳ್ತಂಗಡಿ, ಎಸ್.ಡಿ.ಎಂ ಪಾಲಿಟೆಕ್ನಿಕ್ ಉಜಿರೆ ಮೊದಲಾದ ಪಾಲಿಟೆಕ್ನಿಕ್‌ಗಳಿಂದ ಬಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಹಾಗೂ ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ಸುಮಾರು 200 ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

’ಟಫೇ – ಟ್ರಾಕ್ಟರ್ ಡಿವಿಸನ್’ನ ಸೀನಿಯರ್ ಎಕ್ಸಿಕ್ಯೂಟಿವ್ ಪ್ರದೀಪ್ ಕುಮಾರ ಇವರು ಕಂಪೆನಿಯ ಬಗ್ಗೆ ವಿವರವಾದ ಮಾಹಿತಿ ನೀಡಿದರು. ನಂತರ ಪರ್‍ಸನೆಲ್ ಮ್ಯಾನೇಜರ್ ಕೇಶವ್ ಹಾಗೂ ಪ್ರದೀಪ್ ಕುಮಾರ್ ಇವರು ನೇಮಕಾತಿ ಸಂದರ್ಶನ ನಡೆಸಿ ಕೊಟ್ಟರು. ಪ್ರಾಚಾರ್ಯರಾದ ಶ್ರೀ ಗೋಪಿನಾಥ ಶೆಟ್ಟಿ ಇವರ ಮಾಗದಶನದಲ್ಲಿ ನಡೆದ ನೇಮಕಾತಿ ಪ್ರಕ್ರಿಯೆಯನ್ನು ಸಂಸ್ಥೆಯ ಉದ್ಯೋಗ ಮಾಹಿತಿ ಹಾಗೂ ತರಬೇತಿ ವಿಭಾಗದ ನಿಯೋಜನ ಅಧಿಕಾರಿಗಳಾದ ಶ್ರೀಮತಿ ಉಷಾಕಿರಣ್ ಮತ್ತು ಶ್ರೀ ಕಿರಣ್‌ಪಾಲ್ ಸಂಯೋಜಿಸಿದರು. ಕಾಲೇಜಿನ ಉಪನ್ಯಾಸಕರುಗಳು ಸಹಕರಿಸಿದರು.

Highslide for Wordpress Plugin