ಆತ್ಮ ಮತ್ತು ಪರಮಾತ್ಮನನ್ನು ಒಂದುಗೂಡಿಸುವುದೇ ಯೋಗ – ಪ್ರಸನ್ನ ಎನ್. ಭಟ್
ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಯೋಗ ಶಿಕ್ಷಕರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಪುತ್ತೂರು ನಗರ ಕಾರ್ಯವಾಹ ಶ್ರೀ ಚಂದ್ರಶೇಖರ್ ನಡೆಸಿಕೊಟ್ಟರು.
ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಸಂಚಾಲಕರಾದ ಸಿ. ಮಹಾದೇವ ಶಾಸ್ತ್ರಿ ಮಣಿಲ ಇವರು ಯೋಗದಿಂದ ಆರೋಗ್ಯ, ಪ್ರಧಾನಿ ಮೋದೀಜಿಯವರ ಆಶಯದಂತೆ ಯೋಗವನ್ನು ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳೋಣ ಮತ್ತು ಸದೃಢ ಭಾರತವನ್ನು ನಿರ್ಮಿಸೋಣ ಎಂದರು.
ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಸನ್ನ ಎನ್ ಭಟ್ ಇವರು ಪತಂಜಲಿಯ ಅಷ್ಟಾಂಗ ಯೋಗದ ಕುರಿತಾಗಿ ಹೇಳುತ್ತಾ, ಕರ್ಮಯೋಗ, ಭಕ್ತಿಯೋಗ, ರಾಜಯೋಗ ಮತ್ತು ಜ್ಞಾನಯೋಗದ ಬಗ್ಗೆ ತಿಳಿಸಿದರು. ಮನಸ್ಸು ಮತ್ತು ಬುದ್ಧಿಯ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಯೋಗ ಸಹಕಾರಿ, ಆತ್ಮ ಪರಮಾತ್ಮನನ್ನು ಒಂದುಗೂಡಿಸುವುದೇ ಯೋಗ ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೆಶಕರಾದ ಪಿ. ವಾಮನ ಪೈ, ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಸದಸ್ಯರುಗಳಾದ ಶ್ರೀಮತಿ ಮೋಹಿನಿ ದಿವಾಕರ್, ಶ್ರೀಮತಿ ತ್ರಿವೇಣಿ ಪೆರುವೋಡಿ, ಶ್ರೀ ವಿಪಿನ್ ಕುಮಾರ್ ಕೆ. ಭಾಗವಹಿಸಿದರು. ವಿವೇಕಾನಂದ ಪಾಲಿಟೆಕ್ನಿಕ್‌ನ ಪ್ರಚಾರ್ಯರಾದ ಎಂ. ಗೋಪಿನಾಥ ಶೆಟ್ಟಿ, ನೇತೃತ್ವದಲ್ಲಿ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.