• 08251 231197
  • vptputtur@yahoo.co.in

ಪ್ರಧಾನಮಂತ್ರಿ ಜನೌಷಧಿ ಯೋಜನೆಯ ಮಾಹಿತಿ ಕಾರ್ಯಾಗಾರ

ಪುತ್ತೂರು: ಪ್ರಧಾನಮಂತ್ರಿ ಜನೌಷಧಿ ಯೋಜನೆಯ ಬಗ್ಗೆ ವಿವೇಕಾನಂದ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರವನ್ನು ಜನೌಷಧಿ ಕರ್ನಾಟಕ ಪ್ರಾಂತೀಯ ವಿಭಾಗಾಧಿಕಾರಿಯಾದ ಡಾ| ಅನಿಲ ದೀಪಕ್ ರೈ ನಡೆಸಿಕೊಟ್ಟರು. ಮುಖ್ಯವಾಗಿ ಮಾರ್ಚ್ 01 ರಿಂದ ಮಾರ್ಚ್ 07 ರವರೆಗೆ ಒಂದು ವಾರವನ್ನು ಜನೌಷಧಿ ವಾರವಾಗಿ ದೇಶಾದ್ಯಂತ ಆಚರಿಸಲಾಗುತ್ತಿದ್ದು ಈ ಬಗ್ಗೆ ಯುವ ಜನರಲ್ಲಿ ಅರಿವನ್ನು ಮೂಡಿಸುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

janaushadi (1)

janaushadi (2)

ಈ ಸಂದರ್ಭದಲ್ಲಿ ಡಾ| ಅನಿಲ ದೀಪಕ್ ರೈ ಮಾತನಾಡುತ್ತಾ, ಜನೌಷಧಿಯ ಔಷಧಾಲಯಗಳಲ್ಲಿ ದೊರಕುವ ಎಲ್ಲಾ ವಿಧವಾದ ಔಷಧಿಗಳು ಉತ್ತಮ ಗುಣಮಟ್ಟದಾಗಿದ್ದು ಅತ್ಯಂತ ಕಡಿಮೆ ಬೆಲೆಯಲ್ಲಿ ರೋಗಿಗಳ ಕೈಗೆಟಕುವಂತಿದೆ. ಈ ಯೋಜನೆಯ ಮುಖ್ಯ ಉದ್ದೇಶ ಬಡ ಮತ್ತು ಮಧ್ಯಮ ವರ್ಗದ ಜನರನ್ನು ತಲುಪುವಂತದ್ದಾಗಿದೆ. ಆದರೆ ಈ ಯೋಜನೆಯ ಹೆಚ್ಚಿನ ಲಾಭವನ್ನು ಶ್ರೀಮಂತ ವರ್ಗದ ಜನ ಪಡೆದುಕೊಳ್ಳುತ್ತಿದ್ದು ಬಡ ಮತ್ತು ಮಧ್ಯಮ ವರ್ಗದ ಜನರಲ್ಲಿ ಜನೌಷಧಿಯ ಔಷಧಾಲಯಗಳಲ್ಲಿ ದೊರಕುವ ಔಷಧಿಗಳ ಗುಣಮಟ್ಟದ ಬಗ್ಗೆ ಅರಿವು ಮೂಡಿಸಲು ವಿದ್ಯಾರ್ಥಿ ವರ್ಗ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸಮೂಹಕ್ಕೆ ಜನೌಷಧಿ ಯೋಜನೆಯ ಮಾಹಿತಿಯನ್ನು ಕೊಟ್ಟು ಅವರಿಂದ ಜನಸಾಮಾನ್ಯರಿಗೆ ಅರಿವನ್ನು ಮೂಡಿಸುವಂತ ಕೆಲಸಕ್ಕೆ ಜನೌಷಧಿ ವಾರ ಗುರಿ ಇಟ್ಟುಕೊಂಡಿದೆ ಎಂದರು.

ಪ್ರಾಚಾರ್ಯರಾದ ಶ್ರೀ ಗೋಪಿನಾಥ ಶೆಟ್ಟಿ ಇವರ ಮಾಗದಶನದಲ್ಲಿ ನಡೆದ ಈ ಕಾಂiiಕ್ರಮದಲ್ಲಿ ವಿಭಾಗ ಮುಖ್ಯಸ್ಥರು, ಉಪನ್ಯಾಸಕರುಗಳು ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಿವಿಲ್ ವಿಭಾಗ ಮುಖ್ಯಸ್ಥರಾದ ಶ್ರೀ ರವಿರಾಮ್ ಯಸ್ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin