ಪುತ್ತೂರು: ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಮಂಗಳೂರು ಇದರ ಅಂಗಸಂಸ್ಥೆಯಾದ ಆಲ್ಫಾ ಟೆಕ್ನಿಕಲ್ ಟ್ರೈನಿಂಗ್ ಮತ್ತು ಡೆವಲಪ್‌ಮೆಂಟ್ ಸೆಂಟರ್‌ನ ವತಿಯಿಂದ ವಿವೇಕಾನಂದ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗಳಿಗೆ ಬೆಂಕಿ ಅವಘಡದ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು.
ಆಲ್ಫಾ ಟೆಕ್ನಿಕಲ್ ಟ್ರೈನಿಂಗ್ ಮತ್ತು ಡೆವಲಪ್‌ಮೆಂಟ್ ಸೆಂಟರ್‌ನ ಸಂಪನ್ಮೂಲ ವ್ಯಕ್ತಿನಿವೃತ್ತ ವಾಯುಸೇನಾಧಿಕಾರಿ ಡಾ| ರಾಜೇಶ್ ಶೆಟ್ಟಿ ಇವರು ಬೆಂಕಿ ಅವಘಡ ನಡೆಯಲು ಕಾರಣ ಮತ್ತು ಆ ಸಮಯದಲ್ಲಿ ನಾವು ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿದರು. ವಿವಿಧ ಫೈರ್ ಎಂಡ್ ಸೇಪ್ಟಿ ಕೋರ್ಸುಗಳು ಹಾಗೂ ಉದ್ಯೋಗಾವಕಾಶಗಳ ಬಗ್ಗೆ ವಿವರಿಸಿದರು. ಮರೀನ್ ಇಂಜಿನಿಯರ್ ತೇಜಪಾಲ್ ಬಂಗೇರ ಅವರು ವಿದ್ಯಾರ್ಥಿಗಳಿಗೆ ಬೆಂಕಿ ನಂದಿಸುವ ಉಪಕರಣದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಈ ಸಂದರ್ಭ ಆಲ್ಫಾ ಟೆಕ್ನಿಕಲ್ ಟ್ರೈನಿಂಗ್ ಮತ್ತು ಡೆವಲಪ್‌ಮೆಂಟ್ ಸೆಂಟರ್‌ನ ನಿರ್ದೆಶಕರಾದ ನಿವೃತ್ತ ಭೂಸೇನಾಧಿಕಾರಿ ಶ್ರೀ ಕೃಷ್ಣ ಶ್ರೀನಿವಾಸ ಬಾಬು ಅವರು ಉಪಸ್ಥಿತರಿದ್ದರು.
ವಿವೇಕಾನಂದ ಪಾಲಿಟೆಕ್ನಿಕ್‌ನ ಪ್ರಾಚಾರ್ಯರಾದ ಶ್ರೀ ಗೋಪಿನಾಥ ಶೆಟ್ಟಿ ಇವರ ಮಾಗದಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಭಾಗ ಮುಖ್ಯಸ್ಥರು,ಉಪನ್ಯಾಸಕರುಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಆಟೋಮೊಬೈಲ್ ವಿಭಾಗದ ಉಪನ್ಯಾಸಕರಾದ ಚಿದಾನಂದ ಯನ್ ಅತಿಥಿಗಳನ್ನು ಪರಿಚಯಿಸಿಸ್ವಾಗತಿಸಿದರು. ಮೆಕಾನಿಕಲ್ ಉಪನ್ಯಾಸಕರಾದ ಪ್ರಶಾಂತ್ ಕೆವಂದಿಸಿದರು.