• 08251 231197
  • vptputtur@yahoo.co.in

ದೇಶ ಕಂಡ ಅತ್ಯಂತ ದೊಡ್ಡ ಪ್ರತಿಭೆ ಸರ್ ಎಂ. ವಿಶ್ವೇಶ್ವರಯ್ಯ – ಪ್ರಸನ್ನ ಎನ್ ಭಟ್

ಪುತ್ತೂರು: ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಇವರ ಜನ್ಮದಿನವನ್ನು ಇಂಜಿನಿಯರ್ಸ್ ಡೇ ಆಗಿ ಆಚರಿಸಲಾಯಿತು. ಈ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಸನ್ನ ಎನ್ ಭಟ್ ಇವರು ಸರ್ ಎಂ. ವಿಶ್ವೇಶ್ವರಯ್ಯನವರು ನಮ್ಮ ದೇಶ ಕಂಡ ಅತ್ಯಂತ ದೊಡ್ಡ ಪ್ರತಿಭೆ. ಕಠಿಣ ಪರಿಶ್ರಮ ಮತ್ತು ಶಿಸ್ತು ಅವರ ದ್ಯೇಯವಾಗಿತ್ತು, ಔದ್ಯೋಗಿಕರಣವೇ ದೇಶದ ಆಭಿವೃದ್ದಿಗೆ ಕಾರಣ ಎಂಬ ನಿಲುವು ಅವರಲ್ಲಿತ್ತು. ಆತ್ಮಗೌರವಕ್ಕೆ ಚ್ಯುತಿ ಬಾರದಂತೆ ಗೌರವದಿಂದ ಶಿಸ್ತಿನಿಂದ ಅವರು ಬಾಳಿದರು. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ಸ್ವಾರಸ್ಯಕರವಾದ ಕಥೆಯೊಂದಿಗೆ ವಿವರಿಸುತ್ತಾ ವಿಶ್ವೇಶ್ವರಯ್ಯನವರ ಧ್ಯೇಯ, ಶಿಸ್ತನ್ನು ನಮ್ಮಲ್ಲಿ ಮೈಗೂಡಿಸಿಕೊಳ್ಳೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ ಪುತ್ತೂರಿನ ಖ್ಯಾತ ಸಿವಿಲ್ ಇಂಜಿನಿಯರ್ ರಾಮಚಂದ್ರ ಘಾಟೆ ಇವರನ್ನು ಸನ್ಮಾನಿಸಲಾಯಿತು. ಇವರು ವಿದ್ಯಾರ್ಥಿಗಳಿಗೆ ಇಂಜಿನಿಯರ್ಸ್ಸ್ ಡೇ ಶುಭಾಶಯ ತಿಳಿಸಿದರು. ಇವರ ಕಿರು ಪರಿಚಯವನ್ನು ತೃತೀಯ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಉದಯ್ ಕಿಷ್ಣು ನಡೆಸಿಕೊಟ್ಟರು.

DSC_0560

DSC_0562

DSC_0513

ಈ ಸಮಾರಂಭದ ಮುಖ್ಯಅತಿಥಿ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಸಂಚಾಲಕರಾದ ಸಿ.ಮಹಾದೇವ ಶಾಸ್ತ್ರಿ ಮಣಿಲ ಇವರು ವಿದ್ಯಾರ್ಥಿಗಳ ಶಿಸ್ತಿನ ಬಗ್ಗೆ ಅಭಿನಂದಿಸುತ್ತಾ ಡಿಪ್ಲೋಮ ವಿದ್ಯಾರ್ಥಿಗಳು ತಮ್ಮ ವಿದ್ಯಾಬ್ಯಾಸದ ಸಂದರ್ಭದಲ್ಲಿ ಹೇಗೆ ಪರಿಣಿತಿಯನ್ನು ಪಡೆಯಬಹುದು ಎಂದು ವಿವರಿಸಿದರು. ವಿದ್ಯಾರ್ಥಿಗಳು ತಪಸ್ಸಿನಂತೆ ವಿದ್ಯಾಬ್ಯಾಸ ಮಾಡಿ ಜೀವನದಲ್ಲಿ ಯಶಸ್ವಿಯನ್ನು ಹೊಂದಬೇಕು, ಇಂಜಿನಿಯರ್ ಯಾರು ಬೇಕಾದರೂ ಆಗಬಹುದು ಆದ್ರೆ ಅದರಲ್ಲಿ ಆಸಕ್ತಿಯಿಂದ ಅಧ್ಯಯನ ಮಾಡಿದ್ರೆ ಮಾತ್ರ ಜೀವನದಲ್ಲಿ ಯಶಸ್ವಿ ಇಂಜಿನಿಯರ್ ಆಗಬಹುದು ಎಂದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಚಂದ್ರಕುಮಾರ ಅವರು ಸರ್ ಎಂ. ವಿಶ್ವೇಶ್ವರಯ್ಯನವರ ಜೀವನ ಚರಿತ್ರೆಯನ್ನು ಸವಿವರವಾಗಿ ವಿವರಿಸುತ್ತಾ ಕಾರ್ಯತತ್ಪರತೆ ಹಾಗೂ ಸಮಯಪ್ರಜ್ಞೆಯಿಂದ ವಿಶ್ವೇಶ್ವರಯ್ಯನವರು ಏನೆಲ್ಲಾ ಸಾಧನೆ ಮಾಡಿದರು, ಮೈಸೂರು ಸಂಸ್ಥಾನದ ಆಭಿವೃಧ್ಧಿಗೆ ಹೇಗೆ ರೂವಾರಿಯಾದರು ಎಂದು ತಿಳಿಸಿದರು. ಕಾರ್ಯಕ್ರಮದ ಇನ್ನೋರ್ವ ಅತಿಥಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ರವಿರಾಮ್ ಎಸ್ ಒಂದು ಕಟ್ಟಡದ ಸಂಪೂರ್ಣ ಮಾಹಿತಿ ನಮಗೆ ಸಿಗಬೇಕಾದರೆ ಕಾಮಗಾರಿಯ ಆರಂಭದಿಂದಲೇ ನೋಡಬೇಕು ಕಟ್ಟಡ ಪೂರ್ಣಗೊಂಡನಂತರ ನೋಡಿದರೆ ನಮಗೆ ಅದರ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಸಾದ್ಯವಿಲ್ಲ ರಾಮಚಂದ್ರ ಘಾಟೆಯವರಂತಹ ಯಶಸ್ವಿ ಸಮಾಜಸೇವಕ ಇಂಜಿನೀಯರ್‌ರಿಂದ ನಾವು ಇಂತಹ ಎಷ್ಟೋ ಮಾಹಿತಿಯನ್ನು ತಿಳಿದುಕೊಳ್ಳಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪಾಲಿಟೆಕ್ನಿಕ್‌ನ ಪ್ರಾಚಾರ್ಯರಾದ ಎಂ.ಗೋಪಿನಾಥ್ ಶೆಟ್ಟಿ, ಬಡತನ ಎಂಬುದು ಶಾಪವಲ್ಲ ಬಡತನದಲ್ಲಿ ಇದ್ದು ಏನಾದರೂ ಸಾಧಿಸುವುದೇ ಸಾಧನೆ. ವಿಶ್ವೇಶ್ವರಯ್ಯನವರು ಬಡತನವಿದ್ದರೂ ಹೇಗೆ ಪರಿಶ್ರಮ ಪಟ್ಟು ತಮ್ಮ ವಿದ್ಯಾಭ್ಯಾಸ ಮುಂದುವರಿಸಿ ಸ್ವಾಭಿಮಾನದಿಂದ ಶಿಸ್ತಿನಿಂದ ಬದುಕಿ, ಹೈದ್ರಾಬಾದ್ ನಗರ, ಕೆ.ಆರ್.ಎಸ್., ಎಸ್. ಜೆ. ಪಾಲಿಟೆಕ್ನಿಕ್ ಮುಂತಾದವುಗಳ ರಚನೆಗೆ ಹೇಗೆ ಕಾರಣಕರ್ತರಾದರು ಎಂಬುದನ್ನು ಸವಿವರವಾಗಿ ತಿಳಿಸಿದರು. ನಾವು ನಮ್ಮ ಕೆಲಸವನ್ನು ಉದಾಸೀನತೆ ಬಿಟ್ಟು ಶಿಸ್ತಿನಿಂದ ಕಷ್ಟಪಟ್ಟು ಮಾಡಿದರೆ ನಮ್ಮ ಕೆಲಸವನ್ನು ಉಳಿದವರು ಗುರುತಿಸುವಂತಾಗುತ್ತದೆ ಎಂದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ತೃತೀಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ನವನೀತ್ ಸ್ವಾಗತ ಭಾಷಣದೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ತೃತೀಯ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಪವನ್ ಸರ್ ಎಂ. ವಿಶ್ವೇಶ್ವರಯ್ಯನವರ ಬಗ್ಗೆ ಕಿರು ಪರಿಚಯ ನೀಡಿದರು. ವಿದ್ಯಾರ್ಥಿನಿ ತ್ರಿವೇಣಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿಯರಾದ ಪೂಜಾ, ಮೇಘಾ, ನಂದಿನಿ, ದೀಕ್ಷಿತಾ ಪ್ರಾರ್ಥಿಸಿದರು. ವಿದ್ಯಾರ್ಥಿ ಮಹಮ್ಮದ್ ಶಾಲಿಕ್ ಧನ್ಯವಾದ ನೀಡಿದರು.

Highslide for Wordpress Plugin