ಪುತ್ತೂರು: ಗ್ರಾಮ ವಿಕಾಸ ಯೋಜನೆ, ಇದರ ಆಶ್ರಯದಲ್ಲಿ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಪುತ್ತೂರು ಇದರ ಸಹಯೋಗದೊಂದಿಗೆ ಸಾಕು ನಾಯಿಗಳಿಗೆ ಹುಚ್ಚು ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮ ಪಡ್ಡಾಯೂರು ಹಾಗೂ ಪಡ್ನೂರು ಗ್ರಾಮಗಳಲ್ಲಿ ನಡೆಯಿತು.
ಪುತ್ತೂರು ವಲಯದ ಪಶುಪಾಲನಾ ವೈದ್ಯಾಧಿಕಾರಿಯಾದ ಧiಪಾಲ ಗೌಡ ಕರಂದ್ಲಾಜೆ ಇವರು ಸಾಕು ನಾಯಿಗಳಿಗೆ ಲಸಿಕೆ ಕೊಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಲಸಿಕಾ ಕಾರ್ಯಕ್ರಮವು ಅನ್ನಪೂರ್ಣೆಶ್ವರಿ ಭಜನಾಮಂದಿರ ಪಡ್ಡಾಯೂರು, ಪಳ್ಳ ಜಂಕ್ಷನ್ ಹಾಗೂ ಪಡ್ನೂರು ಹಾಲು ಉತ್ಪಾದಕರ ಸಂಘದಲ್ಲಿ ನಡೆಯಿತು. ಸುಮಾರು 90 ಸಾಕು ನಾಯಿಗಳಿಗೆ ಚುಚ್ಚುಮದ್ದು ನೀಡಲಾಯಿತು. ವಿವೇಕಾನಂದ ಪಾಲಿಟೆಕ್ನಿಕ್‌ನ ಪ್ರಾಚಾರ್ಯರಾದ ಗೋಪಿನಾಥ ಶೆಟ್ಟಿ ಎಂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗ್ರಾಮ ವಿಕಾಸ ಯೋಜನೆಯ ಅದ್ಯಾಪಕ ಪ್ರತಿನಿದಿ ವಿನ್ಯಾಸ್ ಪಿ.ಕೆ. ಹಾಗೂ ಗ್ರಾಮ ವಿಕಾಸ ಯೋಜನೆಯ ಸಂಚಾಲಕ ಶ್ರೀನಿವಾಸ ಪೆರ್‍ವೋಡಿ ಲಸಿಕಾ ಕಾರ್ಯಕ್ರಮ ಸಂಯೋಜಿಸಿದ್ದರು.