ವಿವೇಕಾನಂದ ಪಾಲಿಟೆಕ್ನಿಕ್‌ನ ವಾರ್ಷಿಕ ಕ್ರೀಡಾಕೂಟ- 2015

ವಿವೇಕಾನಂದ ಪಾಲಿಟೆಕ್ನಿಕ್‌ನ ವಾರ್ಷಿಕ ಕ್ರೀಡಾಕೂಟವನ್ನು ವಿವೇಕಾನಂದ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಫ್ರೊಫೆಸರ್‌ ಆರ್. ವೇದವ್ಯಾಸ ಇವರು ಉದ್ಘಾಟಿಸಿದರು. ಹನುಮಂತನ ಶಕ್ತಿ ತಿಳಿಯಲು ಆತ ಸಮುದ್ರಲಂಘನ ಮಾಡಬೇಕಾಯಿತು. ಅದೇ ರೀತಿ ವಿದ್ಯಾರ್ಥಿಗಳ ಶಕ್ತಿ ಕ್ರೀಡಾಕೂಟಗಳ ಮೂಲಕ ತಿಳಿಯುತ್ತದೆ ಎಂದು ನುಡಿದರು. ಪಾಲಿಟೆಕ್ನಿಕ್‌ನ ಬಹುತೇಕ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಉಪಪ್ರಾಂಶುಪಾಲ ಶ್ರೀ ಬಿ. ಹರೇಕೃಷ್ಣ, ಎಲ್ಲಾ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು. ಕ್ರೀಡಾಕಾರ್ಯದರ್ಶಿ ರೋಶನ್ ಯಂ.ಎಲ್. ಕ್ರೀಡಾಜ್ಯೋತಿ ಬೆಳಗಿದರು. ವಿದ್ಯಾರ್ಥಿ ನಾಯಕ ಸಬಿತ್ ಶೆಟ್ಟಿ ಎಲ್ಲರನ್ನೂ ಸ್ವಾಗತಿಸಿದ್ದು, ವಿದ್ಯಾರ್ಥಿನಿ ಪ್ರತಿನಿಧಿ ರಕ್ಷಾ ಧನ್ಯವಾದ ಸಮರ್ಪಿಸಿದರು. ವಿಜ್ಞಾನ ವಿಭಾಗ ಮುಖ್ಯಸ್ಥ ಶ್ರೀ ಹರೀಶ್ ಭಟ್‌ ಕಾರ್ಯಕ್ರಮ ನೆರವೇರಿಸಿಕೊಟ್ಟರು.

sports

Highslide for Wordpress Plugin