ವಿವೇಕಾನಂದ ಪಾಲಿಟೆಕ್ನಿಕ್‌ನ ವಾರ್ಷಿಕ ಕ್ರೀಡಾಕೂಟ- 2015

ವಿವೇಕಾನಂದ ಪಾಲಿಟೆಕ್ನಿಕ್‌ನ ವಾರ್ಷಿಕ ಕ್ರೀಡಾಕೂಟ- 2015

Friday, February 27th, 2015

ವಿವೇಕಾನಂದ ಪಾಲಿಟೆಕ್ನಿಕ್‌ನ ವಾರ್ಷಿಕ ಕ್ರೀಡಾಕೂಟವನ್ನು ವಿವೇಕಾನಂದ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಫ್ರೊಫೆಸರ್‌ ಆರ್. ವೇದವ್ಯಾಸ ಇವರು ಉದ್ಘಾಟಿಸಿದರು. ಹನುಮಂತನ ಶಕ್ತಿ ತಿಳಿಯಲು ಆತ ಸಮುದ್ರಲಂಘನ ಮಾಡಬೇಕಾಯಿತು. ಅದೇ ರೀತಿ ವಿದ್ಯಾರ್ಥಿಗಳ ಶಕ್ತಿ ಕ್ರೀಡಾಕೂಟಗಳ ಮೂಲಕ ತಿಳಿಯುತ್ತದೆ ಎಂದು ನುಡಿದರು. ಪಾಲಿಟೆಕ್ನಿಕ್‌ನ ಬಹುತೇಕ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಉಪಪ್ರಾಂಶುಪಾಲ ಶ್ರೀ ಬಿ. ಹರೇಕೃಷ್ಣ, ಎಲ್ಲಾ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು. ಕ್ರೀಡಾಕಾರ್ಯದರ್ಶಿ ರೋಶನ್ ಯಂ.ಎಲ್. ಕ್ರೀಡಾಜ್ಯೋತಿ ಬೆಳಗಿದರು. ವಿದ್ಯಾರ್ಥಿ ನಾಯಕ ಸಬಿತ್ ಶೆಟ್ಟಿ ಎಲ್ಲರನ್ನೂ ಸ್ವಾಗತಿಸಿದ್ದು, […]

ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಆಯುಧ ಪೂಜೆ ಆಚರಣೆ

ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಆಯುಧ ಪೂಜೆ ಆಚರಣೆ

Friday, October 3rd, 2014

ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿಆಯುಧ ಪೂಜೆಯನ್ನು 1-10-2014 ರಂದು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾಲಯದ ವಿವಿಧ ಪ್ರಯೋಗಾಲಯಗಳನ್ನು ಆಲಂಕರಿಸಲಾಯಿತು. ವೇದಮೂರ್ತಿ ಶ್ರೀ ಮಿತ್ತೂರು ರಾಮಕೃಷ್ಣ ಭಟ್ ಇವರ ನೇತೃತ್ವದಲ್ಲಿ ಪ್ರಯೋಗಾಲಯಗಳಿಗೂ ಹಾಗೂ ವಾಹನಗಳಿಗೂ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಧೀ:ಶಕ್ತಿ ಮಹಿಳಾ ಯಕ್ಷ ಬಳಗ ಪುತ್ತೂರು ಇವರಿಂದ ದಕ್ಷಯಜ್ಞ ಎಂಬ ತಾಳಮದ್ದಳೆ ನಡೆಯಿತು. ಈ ಸಂದರ್ಭದಲ್ಲಿ ತೃತೀಯ ಮೆಕಾನಿಕಲ್ ವಿದ್ಯಾರ್ಥಿಯಾದ ವಿಘ್ನೇಶ್‌ಗೌಡ ಹಾಗೂ ತಂಡ ನಿರೂಪಿಸಿದ ಕಿರು ಚಲನಚಿತ್ರ A DAY IN THE JUNGLE ನ್ನು ವಿದ್ಯಾಲಯದ ಆಡಳಿತ […]

ಕ್ಲಬ್, ಪಬ್ ಮತ್ತು ವೆಬ್ ನಿಂದ ದೂರ ನಿಂತು ಸ್ವಸ್ಥಸಮಾಜ ನಿರ್ಮಿಸಿ ವಿದ್ಯಾರ್ಥಿಗಳಿಗೆ ಆದರ್ಶ ಗೋಖಲೆ ಕರೆ

ಕ್ಲಬ್, ಪಬ್ ಮತ್ತು ವೆಬ್ ನಿಂದ ದೂರ ನಿಂತು ಸ್ವಸ್ಥಸಮಾಜ ನಿರ್ಮಿಸಿ ವಿದ್ಯಾರ್ಥಿಗಳಿಗೆ ಆದರ್ಶ ಗೋಖಲೆ ಕರೆ

Friday, September 19th, 2014

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನ 2014-15 ರ ಸಾಲಿನ ವಿದ್ಯಾರ್ಥಿ ಸಂಘದ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭವು 18-09-2014 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸ್ಕಾರ ಭಾರತಿ ಮಂಗಳೂರು ವಿಭಾಗದ ಸಂಚಾಲಕರಾದ ಶ್ರೀ ಆದರ್ಶಗೋಖಲೆ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ಮೌಲ್ಯ ಹಾಗೂ ಆದರ್ಶಗಳುಳ್ಳ ಇಂದಿನ ಭಾರತದ ಯುವ ಶಕ್ತಿಯು ಜಗತ್ತಿನ ಗಮನ ಸೆಳೆಯುತ್ತಿದೆ. ಇದರ ಸದುಪಯೋಗ ನಮ್ಮದಾಗಿಸಿಕೊಳ್ಳಬೇಕೆಂದು ಹೇಳಿದರು. ವಿದ್ಯಾರ್ಥಿಗಳು ಪಬ್, ಕ್ಲಬ್ ಹಾಗೂ ವೆಬ್ ನಿಂದ […]

ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಇಂಜಿನಿಯರ್ಸ್ ಡೇ ಆಚರಣೆ

ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಇಂಜಿನಿಯರ್ಸ್ ಡೇ ಆಚರಣೆ

Wednesday, September 17th, 2014

ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಇಂಜಿನಿಯರ್ಸ್ ಡೇಯನ್ನು 15-09-2014 ರಂದು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕ್ನೆ ಮುಖ್ಯ ಅತಿಥಿಯಾಗಿ ಆಗಮಿಸಿದ ವಿವೇಕಾನಂದ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯ ಸಂಚಾಲಕ ಹಾಗೂ ಪುತ್ತೂರಿನ ಯುವ ಉದ್ಯಮಿ ಪುತ್ತೂರು ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್‌ನ ಅಧ್ಯಕ್ಷ ಶ್ರೀ ರವೀಂದ್ರರೈಯವರು ಈ ಸಂದರ್ಭದಲ್ಲಿ ಮಾತನಾಡುತ್ತಾ ವಿದ್ಯಾರ್ಥಿಗಳು ಒಳ್ಳೆಯ ವ್ಯಕ್ತಿಗಳ ಜೀವನವನ್ನು ಅಧ್ಯಯನ ಮಾಡಿ ಅವರ ಒಳ್ಳೆಯ ಗುಣಗಳನ್ನು ತನ್ನಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು ಹಾಗೂ ವಿಶ್ವೇಶ್ವರಯ್ಯರವರು ವಿಭಿನ್ನ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. […]

ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಓಣಂ ಆಚರಣೆ

ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಓಣಂ ಆಚರಣೆ

Thursday, September 11th, 2014

ವಿವೇಕಾನಂದ ಪಾಲಿಟೆಕ್ನಿಕ್‌ಕಾಲೇಜಿನಲ್ಲಿ ಕೇರಳದ ಜನಪ್ರಿಯ ಹಬ್ಬ ಓಣಂನ್ನು 10-09-2014 ರಂದು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗೋಪಿನಾಥ ಶೆಟ್ಟಿ, ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳ ಜೀವನದಲ್ಲಿ ಓಣಂ ಹಬ್ಬವು ಹೊಸ ತಿರುವು ತರಲಿ ಎಂದು ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಶ್ರೀ ಹರೇಕೃಷ್ಣ ಬಿ., ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಶ್ರೀ ಚಂದ್ರಕುಮಾರ್ ಹಾಗೂ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.

ಶಿಕ್ಷಕ - ರಕ್ಷಕ ಸಮಾವೇಶ

ಶಿಕ್ಷಕ – ರಕ್ಷಕ ಸಮಾವೇಶ

Wednesday, September 10th, 2014

ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಇದರ 2014-15 ರ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಕೇಶವ ಸಂಕಲ್ಪದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಸಂಸ್ಥೆಯ ಹಿರಿಯರಾದ ಸ್ಥಾಪಕ ಸಂಚಾಲಕ ಉರಿಮಜಲು ಶ್ರೀ ಕೆ. ರಾಮ ಭಟ್ ಇವರು ದೀಪ ಪ್ರಜ್ವಲಿಸುವುದರ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಅನುಭವದ ನುಡಿಮುತ್ತನ್ನು ಹೇಳುತ್ತಾ, ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಉತ್ತಮ ಮೌಲ್ಯಗಳನ್ನು ಕಲಿಯುತ್ತಾ ಸಮಾಜಕ್ಕೆ ಒಳ್ಳೆಯ ಕೊಡುಗೆಯಾಗಲಿ ಎಂದು ಹಾರೈಸಿದರು. ಸಮಾರಂಭದ […]

ಪಾಲಿಟೆಕ್ನಿಕ್‌ನ ವಾರ್ಷಿಕೋತ್ಸವ

ಪಾಲಿಟೆಕ್ನಿಕ್‌ನ ವಾರ್ಷಿಕೋತ್ಸವ

Wednesday, April 16th, 2014

ಪುತ್ತೂರು: ಯಶಸ್ವಿಗೆ ಕಠಿಣ ದುಡಿಮೆ ಅನಿವಾರ್ಯ, ನೀವು ದೃಢವಾಗಿರುವಾಗ ಅಶಕ್ತರಿಗೆ ಸಹಾಯ ಮಾಡಿ ಎಂದು ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಘಟಕದ ಡಿ.ಜಿ.ಎಂ. ಶ್ರೀ ಹೆಚ್. ಎಸ್. ಕೃಷ್ಣಕುಮಾರ್ ಇವರು ವಿದ್ಯಾರ್ಥಿಗಳಿಗೆ ಕರೆನೀಡಿದರು. ಅವರು ಇಲ್ಲಿನ ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ದಿನಾಂಕ 29-3-2014 ರಂದು ಜರಗಿದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡುತ್ತಾ ಈ ವಿಷಯವನ್ನು ತಿಳಿಸಿದರು. ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಶ್ರೀ ಎಸ್.ಆರ್.ರಂಗಮೂರ್ತಿ ಇವರು ಸಮಾರಂಭದ ಆಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಒಳ್ಳೆಯ ಮನಸ್ಸಿನಿಂದ ಉತ್ಕೃಷ್ಟ ಕೆಲಸ ಮಾಡಿದರೆ ಉನ್ನತಿ […]

ವಾರ್ಷಿಕ ಕ್ರೀಡಾಕೂಟ-2014

ವಾರ್ಷಿಕ ಕ್ರೀಡಾಕೂಟ-2014

Wednesday, April 16th, 2014

ವಿವೇಕಾನಂದ ತಾಂತ್ರಿಕ ವಿದ್ಯಾಲಯದ 2013-14 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವು ದಿನಾಂಕ 8-3-2014 ರ ಶನಿವಾರ ನಡೆಯಿತು. ಕಾರ್ಯಕ್ರಮವನ್ನು ವಿವೇಕಾನಂದ ಪದವಿ ಕಾಲೇಜಿನ ನಿವೃತ್ತ ಉಪ ಪ್ರಾಚಾರ್ಯ ಪ್ರೊಫೆಸರ್ ಯಂ. ಯು. ಪ್ರಭಾಕರ್ ಉದ್ಘಾಟಿಸಿದರು. ಈ ಸಂದರ್ಭ ಅವರು ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವನೆ ಮುಖ್ಯವೇ ಹೊರತು ಸೋಲು, ಗೆಲುವು ಮುಖ್ಯವಲ್ಲ. ವಿದ್ಯಾರ್ಥಿಗಳು ಅವರ ಸಾಮರ್ಥ್ಯದಂತೆ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಎಂದು ಶುಭ ಹಾರೈಸಿದರು. ಕಾಲೇಜಿನ ಪ್ರ್ರಾಂಶುಪಾಲರಾದ ಶ್ರೀ ಗೋಪಿನಾಥ ಶೆಟ್ಟಿ ಹಾಗೂ ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದ […]

ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಕಾರ್ಯಾಗಾರ

ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಕಾರ್ಯಾಗಾರ

Wednesday, March 19th, 2014

ವಿದ್ಯಾವರ್ಧಕ ಸಂಘದ ಪ್ರಶಿಕ್ಷಣ ಘಟಕದಿಂದ ವಿವೇಕಾನಂದ ಪಾಲಿಟೆಕ್ನಿಕ್‌ನ ಉಪನ್ಯಾಸಕರಿಗೆ 8-3-2014 ರಂದು ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಮಣಿಲ ಮಹಾದೇವ ಶಾಸ್ತ್ರಿಯವರು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಪ್ರಥಮ ಅವಧಿಯಲ್ಲಿ ಮಾನಸಿಕ ಸಂಘರ್ಷ ನಿವಾರಣ ತಜ್ಞ ಡಾ. ಮಸ್ಕರೇನಸ್ ಪಿ.ಸಿ. ವಿದ್ಯಾರ್ಥಿಗಳಲ್ಲಿ ಕಂಡುಬರುವ ಮಾನಸಿಕ ಸಂಘರ್ಷದ ಕಾರಣ ಮತ್ತು ಅದರ ಪರಿಹಾರದ ಬಗ್ಗೆ ಭೋದನೆ ಮಾಡಿದರು. ಅವರು ಅಪ್ತ ಸಮಾಲೋಚಕರಾಗಿ ಶಿಕ್ಷಕರು ಯಾವ ತರಹದ […]

ಸಾಂಪ್ರದಾಯಿಕ ದಿನಾಚರಣೆ

ಸಾಂಪ್ರದಾಯಿಕ ದಿನಾಚರಣೆ

Wednesday, March 19th, 2014

ಪುತ್ತೂರು: ಇಲ್ಲಿನ ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಸಾಂಪ್ರದಾಯಿಕ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ ವಿ ನಾರಯಣರವರು ದೀಪಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ವಿದ್ಯಾರ್ಥಿಗಳು ಪಾಠದ ಜೊತೆಯಲ್ಲಿ ಇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ವ್ಯಕ್ತಿತ್ವವನ್ನು ಬೆಳಸಿಕೊಳ್ಳಬೇಕು ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಗೋಪಿನಾಥ್ ಶೆಟ್ಟಿ ಉಪಪ್ರಾಂಶುಪಾಲರಾದ ಶ್ರೀ ಹರೇಕೃಷ್ಣ ಬಿ ಹಾಗು ವಿದ್ಯಾರ್ಥಿ ಕ್ಷೇಮಪಾಲಕರಾದ ಶ್ರೀ ಚಂದ್ರಕುಮಾರ್ ಹಾಗು ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗು […]

Highslide for Wordpress Plugin