• 08251 231197
  • vptputtur@yahoo.co.in

ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಕಾರ್ಯಾಗಾರ

ವಿದ್ಯಾವರ್ಧಕ ಸಂಘದ ಪ್ರಶಿಕ್ಷಣ ಘಟಕದಿಂದ ವಿವೇಕಾನಂದ ಪಾಲಿಟೆಕ್ನಿಕ್‌ನ ಉಪನ್ಯಾಸಕರಿಗೆ 8-3-2014 ರಂದು ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಮಣಿಲ ಮಹಾದೇವ ಶಾಸ್ತ್ರಿಯವರು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಪ್ರಥಮ ಅವಧಿಯಲ್ಲಿ ಮಾನಸಿಕ ಸಂಘರ್ಷ ನಿವಾರಣ ತಜ್ಞ ಡಾ. ಮಸ್ಕರೇನಸ್ ಪಿ.ಸಿ. ವಿದ್ಯಾರ್ಥಿಗಳಲ್ಲಿ ಕಂಡುಬರುವ ಮಾನಸಿಕ ಸಂಘರ್ಷದ ಕಾರಣ ಮತ್ತು ಅದರ ಪರಿಹಾರದ ಬಗ್ಗೆ ಭೋದನೆ ಮಾಡಿದರು. ಅವರು ಅಪ್ತ ಸಮಾಲೋಚಕರಾಗಿ ಶಿಕ್ಷಕರು ಯಾವ ತರಹದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬಹುದುಎಂದು ತಿಳಿಸಿದರು. ಕಾರ್ಯಕ್ರಮದ ತೃತೀಯ ಅವಧಿಯನ್ನು ವಿವೇಕಾನಂದ ಡಿ.ಎಡ್. ಕಾಲೇಜಿನ ಉಪನ್ಯಾಸಕರಾದ ಶ್ರೀ ರಘುರಾಜ್ ಅವರು ಪ್ರಭಾವಕಾರಿ ಸಂಭಾಷಣೆಗೆ ಬೇಕಾದ ಅಂಶಗಳನ್ನು ತಿಳಿಸಿದರು. ನಾಲ್ಕನೇ ಅವಧಿಯಲ್ಲಿ ಪ್ರಗತಿಪರ ಕೃಷಿಕರಾದ ಶ್ರೀ ಸುಭಾಷ್‌ಚಂದ್ರ ಕಳಂಜ, ಇವರು ಶಿಕ್ಷಕನ ಸಾಮಾಜಿಕ ಜವಾಬ್ದಾರಿಯನ್ನು ತಿಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗೋಪಿನಾಥ ಶೆಟ್ಟಿ ಇವರು ವಹಿಸಿದರು. ಶ್ರೀಮತಿ ಉಷಾಕಿರಣ ಅವರು ಸ್ವಾಗತಿಸಿ, ಶ್ರೀ ಚಂದ್ರಕುಮಾರ್ ಅವರು ವಂದನಾರ್ಪಣೆ ಮಾಡಿದರು. ಶ್ರೀ ಸಂದೇಶ್ ಮಯ್ಯ ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾದ ಶ್ರೀ ಶಿವಪ್ರಸಾದ್ ಇ. ಅವರು ವಹಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ಉಪಪ್ರಾಂಶುಪಾಲರಾದ ಶ್ರೀ ಹರೇಕೃಷ್ಣ ಬಿ.ಉಪಸ್ಥಿತರಿದ್ದರು.

Highslide for Wordpress Plugin