• 08251 231197
  • vptputtur@yahoo.co.in

ಕ್ಲಬ್, ಪಬ್ ಮತ್ತು ವೆಬ್ ನಿಂದ ದೂರ ನಿಂತು ಸ್ವಸ್ಥಸಮಾಜ ನಿರ್ಮಿಸಿ ವಿದ್ಯಾರ್ಥಿಗಳಿಗೆ ಆದರ್ಶ ಗೋಖಲೆ ಕರೆ

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನ 2014-15 ರ ಸಾಲಿನ ವಿದ್ಯಾರ್ಥಿ ಸಂಘದ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭವು 18-09-2014 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸ್ಕಾರ ಭಾರತಿ ಮಂಗಳೂರು ವಿಭಾಗದ ಸಂಚಾಲಕರಾದ ಶ್ರೀ ಆದರ್ಶಗೋಖಲೆ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ಮೌಲ್ಯ ಹಾಗೂ ಆದರ್ಶಗಳುಳ್ಳ ಇಂದಿನ ಭಾರತದ ಯುವ ಶಕ್ತಿಯು ಜಗತ್ತಿನ ಗಮನ ಸೆಳೆಯುತ್ತಿದೆ. ಇದರ ಸದುಪಯೋಗ ನಮ್ಮದಾಗಿಸಿಕೊಳ್ಳಬೇಕೆಂದು ಹೇಳಿದರು. ವಿದ್ಯಾರ್ಥಿಗಳು ಪಬ್, ಕ್ಲಬ್ ಹಾಗೂ ವೆಬ್ ನಿಂದ ದೂರವಾಗಿ ಸ್ವಸ್ಥ ಸಮಾಜದ ನಿರ್ಮಾಣದ ಕಡೆ ಗಮನಹರಿಸಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಪುತ್ತೂರಿನ ಶಾಂತಿನಾಥ ಬಸದಿಯ ಆಡಳಿತ ಮಂಡಳಿಯ ವಿಶ್ವಸರಾದ ಶ್ರೀ ಗುಣಪಾಲ್‌ಜೈನ್ ಅವರು ವಿದ್ಯಾರ್ಥಿಗಳು ಇತರರಿಗೆ ಮಾದರಿ ಆಗುವಂತೆ ತಮ್ಮನ್ನು ತಾವು ರೂಪಿಕೊಳ್ಳಬೇಕು ಎಂದು ಹೇಳಿದರು. ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿ ಶ್ರೀ ಚಂದ್ರಕುಮಾರ್ ಇವರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.

ಇಲೆಕ್ಟ್ರಾನಿಕ್ಸ್ ವಿಭಾಗದ ಆಯ್ಕೆ ಶ್ರೇಣಿ ಉಪನ್ಯಾಸಕಿ ಶ್ರೀಮತಿ ಎಸ್. ಜಯಲಕ್ಷ್ಮಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಪಾಲಿಟೆಕ್ನಿಕ್‌ನ ಪ್ರಾಚಾರ್ಯರಾದ ಶ್ರೀ ಗೋಪಿನಾಥ ಶೆಟ್ಟಿಯವರು ಸ್ವಾಗತಿಸಿ, ಕೊನೆಯಲ್ಲಿ ಉಪಪ್ರಾಚಾರ್ಯರಾದ ಶ್ರೀ ಬಿ. ಹರೇಕೃಷ್ಣ ವಂದಿಸಿದರು.

ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀ ಹರೀಶ್ ಭಟ್ ಸಂಯೋಜಿಸಿದ ಈ ಕಾರ್ಯಕ್ರಮದಲ್ಲಿ ಪಾಲಿಟೆಕ್ನಿಕ್‌ನ ಸ್ಥಾಪಕ ಸಂಚಾಲಕರಾದ ಶ್ರೀ ಉರಿಮಜಲು ರಾಮಭಟ್, ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಅಗರ್ತಬೈಲ್ ಕೃಷ್ಣ ನಾಕ್, ಶ್ರೀ ಮಣಿಲ ಮಹಾದೇವ ಶಾಸ್ತ್ರಿ ಸಿ., ಶ್ರೀ ಕೆ.ಟಿ. ಮುರಳಿ, ಶ್ರೀ ಸುರೇಶ್ ಕೆ. ಎಸ್. ಉಪಸ್ಥಿತರಿದ್ದರು.

Highslide for Wordpress Plugin